You are currently browsing the daily archive for ಏಪ್ರಿಲ್ 29, 2008.

Today I was listening to a rendition of Bhadrachachala Ramadasa’s song – ikshwaku kulatililaka, a simple and very moving song set in yadukula kAmbhOji rAga. This raaga, supposed to be of folk origin, has been in use in classical music in the last 3-4 centuries.

Ramadasa lived in early 17th century. He held the position a village chief or a tahasildar in the kindom of Golconda in Bhadrachalam. Tax collection was one of his duties. He used up parts of the funds from the tax collected to renovate the Rama temple at Bhadrachalam, hoping to make good of the money from future donations by devotees. However, that was not to be, and he was charged for misappropriation of state funds, and held a prisoner at Golconda fort for 12 years.

Ramadasa had to undergo torture at the hands of the Sultan’s prison officials (What else do you expect in a prison, anyway!). He was a composer, and he continued composing even when he was serving his term in prison. This particular song, ikshwaku kultilaka ikanaina palukavu is said to have been composed during this time as there are autobiographical references.

In the song, Ramadasa speaks about everything he has done for Sri Rama and his family and shows his anger and finally asks for his help.

Here is one of my favourite renditions of ikShvAku kula tilaka, sung by  Dr BMK –

Balamurali sings ikShwAku kula tilaka

Here is an attempt to translate the song into Kannada – I have not gone for word-to-word translation, but tried to keep the same flow, and at the same time trying to keep the ‘singability’ as much as possible.

ಇಕ್ಷ್ವಾಕು ಕುಲತಿಲಕ ನೀ ಬೇಗ ಹೇಳಯ್ಯ ರಾಮಚಂದ್ರ
ನನಗೀಗ ಕಾವಲಿಗೆ ನೀನಲ್ಲದಿನ್ಯಾರೋ ರಾಮಚಂದ್ರ

ಸುತ್ತ ಪ್ರಾಕಾರವ ಸೊಂಪಾಗಿ ಕಟ್ಟಿಸಿದೆ ರಾಮಚಂದ್ರ
ನಾನು ಸಾವಿರ ವರಹವ ಸುರಿದು ಕಟ್ಟಿಸಿದೆನಲ್ಲ ರಾಮಚಂದ್ರ

ಗೋಪುರ ಮಂಟಪವ ಸೊಗಸಾಗಿ ಕಟ್ಟಿಸಿದೆ ರಾಮಚಂದ್ರ
ಕಡೆಗಾಣಿಸದೆ ಎನ್ನೀಗ ಪೊರೆಯೋ ಮರೆಯದೇ ರಾಮಚಂದ್ರ

ಭರತನಿಗೆ ಮಾಡಿಸಿದೆ ಪಚ್ಚೆಯ ಪದಕವ ರಾಮಚಂದ್ರ
ಆ ಪದಕಕ್ಕೆ ಕೊಟ್ಟೆನೋ ಹತ್ತು ಸಾವಿರ ವರಹ ರಾಮಚಂದ್ರ

ಶತ್ರುಘ್ನಗೆ ಮಾಡಿಸಿದೆ ಬಂಗಾರದೊಡ್ಯಾಣ ರಾಮಚಂದ್ರ
ಹೊಳೆವ ಒಡ್ಯಾಣಕೆ ಮತ್ತೆ ಹತ್ತು ಸಾವಿರ ರಾಮಚಂದ್ರ!

ಲಕ್ಷ್ಮಣನಿಗೆ ಮಾಡಿಸಿದೆ ಮುತ್ತಿನ ಪದಕವು ರಾಮಚಂದ್ರ
ಮುತ್ತಿನ ಪದಕಕ್ಕೆ ಹತ್ತು ಸಾವಿರ ವರಹ ರಾಮಚಂದ್ರ

ಸೀತಮ್ಮಗೆ ಮಾಡಿಸಿದೆ ವಜ್ರದ ಪದಕಾವ ರಾಮಚಂದ್ರ
ಆ ಪದಕಕೆ ತೆತ್ತೆ ಹತ್ತು ಸಾವಿರ ವರಹ ರಾಮಚಂದ್ರ!

ಸುತ್ತಾಡಲು ವಾಹನವ ನಿನಗೆ ಮಾಡಿಸಿಕೊಡಲು ರಾಮಚಂದ್ರ
ಮತ್ತೆ ನನ್ನ ಕಾಲಿಗೆ ಬಿತ್ತಲ್ಲ ಸರಪಳಿಯು ರಾಮಚಂದ್ರ

ಮಿಂಚುವ ತುರಾಯಿ ನಿನಗೆ ಮಾಡಿಸಿಕೊಡಲು ರಾಮಚಂದ್ರ
ನೀ ಮಿರುಗುತಲೇ ನಡೆವೆ! ಪೂರ್ವೀಕರಾಸ್ತಿಯೇ? ರಾಮಚಂದ್ರ?

ಒಡವೆಗಳ ಕೊಟ್ಟವನು ನಿಮ್ಮಪ್ಪ ದಶರಥನೇ? ರಾಮಚಂದ್ರ
ನಿನ ಮಾವ ಜನಕ ಮಹಾರಾಜ ಕಳಿಸಿದನೇ? ರಾಮಚಂದ್ರ!

ನೀನಲ್ಲದಿನ್ಯಾರ ನಿಂದಿಸಲೋ ನಾನೀಗ ರಾಮಚಂದ್ರ
ತಡೆಯಲಾರದೆ ಕಷ್ಟ ಮತ್ತಷ್ಟು ಬೈವೇನೋ ರಾಮಚಂದ್ರ

ತೊರೆಗೆ ಸುರಿದಂಥ ನೀರಂತೆ ನನ ಪಾಡು ರಾಮಚಂದ್ರ
ನನಗೆ ಕೆಡುಕಿನ ಮೇಲೆ ಮತ್ತಷ್ಟು ಕೆಡುಕಾಯ್ತೋ ರಾಮಚಂದ್ರ

ಸರಕಾರದ ಹಣವ ಲೆಕ್ಕಿಸದೇ ಹೋದೇನೋ ರಾಮಚಂದ್ರ
ಚಾವಟಿ ಏಟನು ತಾಳೆ ನೀ ತೀರಿಸೋ ಕಡವ ರಾಮಚಂದ್ರ

ಕೌಸಲ್ಯಾಸುತನೇ ದಶರಥ ತನಯನೆ ಕಾಯೋ ರಾಮಚಂದ್ರ
ಭದ್ರಾಚಲ ಗಿರಿಯದಲಿ ಕ್ಷೇಮದಲಿ ನೆಲೆಸಿಹನೇ ರಾಮಚಂದ್ರ

ನಂಬಿದ ಭಕ್ತರ ಪರಿಪಾಲಿಸುವವ ನೀನೇ ರಾಮಚಂದ್ರ
ಚಂದದಲಿ ನೀ ಶ್ರೀರಾಮದಾಸನ ಸಲಹೋ ರಾಮಚಂದ್ರ

If you believe legends, Rama indeed came to help Ramadasa; may be I will write more about that some other time.

-neelanjana

Hits

  • 752,357

My book “Hamsanada” for iPad, iPhone or iPod

A Collection of  Samskrta Subhashitas, translated to Kannada

http://www.saarangamedia.com/product/hamsanada

My Book, on Google Play!

My Book Hamsanada, on Google Play

My Book Hamsanada, on Google Play

Enter your email address to follow this blog and receive notifications of new posts by email.

Join 9,609 other subscribers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಇತ್ತೀಚಿನ ಟಿಪ್ಪಣಿಗಳು

Manjugouda police pa… ರಲ್ಲಿ Ugra Narasimha of Vijayan…
neelanjana ರಲ್ಲಿ Samasya Poornam – Part…
neelanjana ರಲ್ಲಿ Samasya Poornam – Part…
charukesha ರಲ್ಲಿ Where in the World is Mount…
ನೇಸರ್ ರಲ್ಲಿ Samasya Poornam – Part…
ಏಪ್ರಿಲ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
282930  

ಬಗೆ ಬಗೆ ಬರಹ

ಸಂಗ್ರಹಗಳು