ಹೋದ ವರ್ಷ ಮೌಂಟ್ ಮಡೋನಕ್ಕೆ ಒಂದು ಸಲ ಹೋಗಿದ್ವಿ. ಈ ಸಲನೂ ಹೋಗೋಣ ಅಂತ ಹೋದ್ವಿ  ಕೆಲವು ವಾರಗಳ ಹಿಂದೆ. ಮೌಂಟ್ ಮಡೋನದ  ದಾರಿಯಲ್ಲಿ ಒಂದು ಕಡೆ ಹೂಗಳ ಸಂಭ್ರಮ ಕಂಡುಬಂತು. ಹೋದವರ್ಷ ಇದನ್ನ ಗಮನಿಸಿದ್ದೆವೋ ಇಲ್ವೋ ಮರೆದಿದ್ವಿ. ಸರಿ, ಮರಳಿ ಬರುವಾಗ ಇಲ್ಲೊಮ್ಮೆ ಇಣುಕಿ ನೋಡಬೇಕೆಂದುಕೊಂಡಿದ್ದೂ ಆಯಿತು. ಹಾಗೇ ಮಧ್ಯಾಹ್ನ ಬರುವಾಗ ಹಾಗೇ ಒಳಹೊಕ್ಕೆವು.

ಹೆಸರೂ ಕಾಣದಂತೆ ಹೂವಿನ ಭರಾಟೆ

ಹಸಿರು ಹುಲ್ಲಿನ ಹಾಸು. ಅಂಚಿನಲಿ ಚೆಂಡು ಹೂಗಳ ರಾಶಿ!

ಗುಡಾರದ ಒಳಗೊಂದಷ್ಟು, ಹೊರಗೊಂದಷ್ಟು


ಬಿಳಿ ಬಣ್ಣವಾದರೇನು? ನಾನೇನು ಚೆಲುವಾಗಿಲ್ಲವೇ?

ಬಣ್ಣ! ನನ್ನ ಒಲವಿನ ಬಣ್ಣ! ನನ್ನ ಬದುಕಿನ ಬಣ್ಣ!

ಹೂಗಳ ಜೊತೆ ಬಣ್ಣದ ಸೊಬಗಿನಲ್ಲಿ ಪೈಪೋಟಿಗೆ  ನಿಂತ ಚೋಟುಮೆಣಸಿನಕಾಯಿಗಳು!

ಹೂವಿಂದ ಹೂವಿಗೆ ಹಾರುವ ದುಂಬಿ ಏನನು ಹಾಡುತಿದೆ?

ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಮುಂದೆ ಹೂವ ರಾಶಿ ಚೆಲ್ಲಿರಬೇಕು..

ಯಾರೆ ನೀನು? ರೋಜಾ ಹೂವೇ? ಯಾರೆ ನೀನು ಮಲ್ಲಿಗೆ ಹೂವೇ? ಹೇಳೆ ಓ ಚೆಲುವೆ!

ತಿರುಗಾಡಿ ಸುಸ್ತಾದ್ರೆ, ಅರೆಗಳಿಗೆ ಕೂತ್ಕೊಳಿ..

ಕಟ್ಟೋದಿದ್ರೆ ಕಟ್ಟಬೇಕು ಗೋಡೆ, ಇಂತಹ ಹೂವಿನ ಗೋಡೆ!

ಎತ್ತಕಡೆ ನೋಡಿದರೂ, ಬಣ್ಣವೋ ಬಣ್ಣ

ಏ:ಉ


ಎಲ್ಲಿದೆ ಇದು ಅಂತ ಕೇಳಿದ್ರಾ? ಸಿಂಜೆಂಟಾ ಫ್ಲವರ್ಸ್, ಹೆಕರ್ ಪಾಸ್ ಹೈವೇ (೧೫೨ ಪಶ್ಚಿಮ, ಗಿಲ್ರಾಯ್ ನಿಂದ ವಾಟ್ಸನ್ವಿಲ್ ಗೆ ಹೋಗೋ ದಾರಿಯಲ್ಲಿ).

-ನೀಲಾಂಜನ

Advertisements