“ತಿರುಪೆಯವನೆಲ್ಲಿ ಹೋದನೇ?”  “ಬಲಿಯ ಮನೇಗಿರ್ಬೇಕು ಕಣೇ!”
“ಪಶು ಪ್ರಾಣಿಗಳಿಗೊಡೆಯನೇ?”  “ಗೋಕುಲದಲ್ಲಿ ದನ ಕಾಯ್ತಾನೆ!”
“ಅಯ್ಯೋ ಪಾಪ,  ಹಾವೇ ಹಾರ!”  “ಸದಾ ಹಾವಿನ್ಮೇಲೆ ಮಲಗೋದಾ?”
“ಬಿಡು ಗೋಳು,  ತುಸು ನಗು”  “ಬದ್ಲಾಗಲಾರೆ ನಿನ್ನಂತೆ ಹೊತ್ತುಹೊತ್ತಿಗೂ!”
ಕಡಲಣುಗೆ ಲಕುಮಿಯೂ  ಮಲೆ ಮಗಳು ಗಿರಿಜೆಯೂ  ಹೀಗೆ ಸರಸದಲಿ
ಆಡುತಿಹ ಛೇಡಿಸುವ  ಕೀಟಲೆಯ  ಮಾತುಗಳೆ ಕಾಯಲೆಮ್ಮನ್ನು!

ಸಂಸ್ಕೃತ ಮೂಲ ಹೀಗಿದೆ:

भिक्षुः क्वास्ति बलेर्मखे पशुपतिः किं नास्त्यसौ गोकुले ।
मुग्धे पन्नगभूषणः सखि सदा शेते च तस्योपरि ।
आर्ये मुञ्च विषादमाशु कमले नाहं प्रकृत्या चला ।
चेत्थं वै गिरिजासमुद्रसुतयोः सम्भाषणं पातु वः ॥

-ನೀಲಾಂಜನ

Advertisements