ಜೀವನದಲ್ಲಿ ಕ್ಷೋಭೆಗಳಿಗೇನು ಕೊರತೆ? ಲೆಹ್ಮನ್ ಬ್ರದರ್ಸ್ ಇಂದ ಮಂಗಳೂರಿನಲ್ಲಿ ನಡೆದ ಗಲಾಟೆಯವರೆಗೆ, ಗುಸ್ತಾವ್, ಐಕ್ ನಿಂದ ಹಿಡಿದು  ಬೀಳುತ್ತಿರುವ ಶೇರು ಮಾರುಕಟ್ಟೆಯ ತನಕ ಬೇಕಾದಷ್ಟಿವೆ.

ಈಗ ತಾನೇ ಪುತಿನ ಅವರ ಶ್ರೀರಾಮ ಪಟ್ಟಾಭಿಷೇಕ ಗೀತನಾಟಕವನ್ನು ಓದಿ ಮುಗಿಸಿದೆ. ಅದರಲ್ಲಿ ಕಡೆಯಲ್ಲಿ ಬರುವ ಮಂಗಳ ಶ್ಲೋಕ (ಹೊಸತೇನಲ್ಲದಿದ್ದರೂ) ಹಿಡಿಸಿತು. ಅದನ್ನೇ ಇಲ್ಲಿ ಬರೆದಿರುವೆ.

ಕಾಲಕಾಲಕ್ಕೂ ಮೇಘ ವರ್ಷಿಸಲಿ
ಪೃಥಿವಿಯಾಗಲಿ ಸಸ್ಯಶಾಲಿನಿ
ಕ್ಷೋಭೆಗಳಿಲ್ಲದೆ ದೇಶ ಹದುಳಿರಲಿ
ಸಾಧುಗಭಯ, ಜಗಕೆಲ್ಲವು ಸಮ್ಮುದ

ಇದರ ಮೂಲ ಸುಮಾರು ಎಲ್ಲರಿಗೂ ತಿಳಿದದ್ದೇ ಆಗಿದೆ:

ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ|
ದೇಶೋSಯಂ ಕ್ಷೋಭರಹಿತಃ ಸಾಧವೋ ಸಂತು ನಿರ್ಭಯಾ:||

ಈ ಗೀತರೂಪಕವನ್ನು ಮೊನ್ನೆ ರಂಗದ ಮೇಲೆ ನೋಡಿದ ಮೇಲೆ ಇದನ್ನು ಕುಳಿತು ಓದಬೇಕೆಂದೆನಿಸಿ, ಓದಿದೆ. ಇನ್ನೊಂದಷ್ಟು ಬರೆಯಬೇಕು, ನೋಡೋಣ. ಎಂದಾಗುವುದೋ?

-ನೀಲಾಂಜನ

Advertisements