ಮಾರ್ಚ್ ೨೦, ೨೦೦೮ – ಇವತ್ತು ವಸಂತ ವಿಷುವ!

ವಸಂತದ ಬರವನ್ನು ಸಾರುವ ಈ ಕವಿತೆ ಓದಿ:

Spring: A poem by Thomas Nashe. 1567–1601
   
Spring, the sweet Spring, is the year’s pleasant king;

Then blooms each thing, then maids dance in a ring, 
Cold doth not sting, the pretty birds do sing—  
Cuckoo, jug-jug, pu-we, to-witta-woo! 

The palm and may make country houses gay,          5
Lambs frisk and play, the shepherds pipe all day, 
And we hear aye birds tune this merry lay—  
Cuckoo, jug-jug, pu-we, to-witta-woo! 

The fields breathe sweet, the daisies kiss our feet, 
Young lovers meet, old wives a-sunning sit,   10
In every street these tunes our ears do greet—  
Cuckoo, jug-jug, pu-we, to-witta-woo!  
Spring, the sweet Spring! 

ಮತ್ತೆ ಈ ಗೀತೆಯ ಒಂದು ಸುಂದರ ಅನುವಾದ – ಬಿ.ಎಮ್.ಶ್ರೀ ಅವರ ’ಇಂಗ್ಲಿಷ್ ಗೀತೆಗಳು’ ಸಂಕಲನದಿಂದ – ಇದನ್ನು ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿದ್ದೆಂದು ನೆನಪು.

ವಸಂತ

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಪೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ ಹಕ್ಕಿಗಳುಲಿತವೆ ಚೆಂದ,
ಹಕ್ಕಿಗಳುಲಿತವೆ ಚಂದ

ಕೂವೂ ಜಗ್‌ ಜಗ್‌ ಪುವ್ವೀ ಟೂವಿಟ್ಟವೂ !

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,

ಕೂವೂ ಜಗ್‌ ಜಗ್‌ ಪುವ್ವೀ ಟೂವಿಟ್ಟವೂ !

ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು

ಕೂವೂ ಜಗ್‌ ಜಗ್‌ ಪುವ್ವೀ ಟೂವಿಟ್ಟವೂ !

ಬಂದ ವಸಂತ! ನಮ್ಮ ರಾಜ ವಸಂತ !

ಭಾಷಾಂತರ ಮಾಡಿದರೆ ಹೀಗೆ ಮಾಡಬೇಕು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ!

-ನೀಲಾಂಜನ

Advertisements