ಮಾರ್ಚ್ ೨೦, ೨೦೦೮ – ಇವತ್ತು ವಸಂತ ವಿಷುವ!
ವಸಂತದ ಬರವನ್ನು ಸಾರುವ ಈ ಕವಿತೆ ಓದಿ:
Spring: A poem by Thomas Nashe. 1567–1601
Spring, the sweet Spring, is the year’s pleasant king;
Then blooms each thing, then maids dance in a ring,
Cold doth not sting, the pretty birds do sing—
Cuckoo, jug-jug, pu-we, to-witta-woo!
The palm and may make country houses gay, 5
Lambs frisk and play, the shepherds pipe all day,
And we hear aye birds tune this merry lay—
Cuckoo, jug-jug, pu-we, to-witta-woo!
The fields breathe sweet, the daisies kiss our feet,
Young lovers meet, old wives a-sunning sit, 10
In every street these tunes our ears do greet—
Cuckoo, jug-jug, pu-we, to-witta-woo!
Spring, the sweet Spring!
ಮತ್ತೆ ಈ ಗೀತೆಯ ಒಂದು ಸುಂದರ ಅನುವಾದ – ಬಿ.ಎಮ್.ಶ್ರೀ ಅವರ ’ಇಂಗ್ಲಿಷ್ ಗೀತೆಗಳು’ ಸಂಕಲನದಿಂದ – ಇದನ್ನು ಪ್ರಾಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿದ್ದೆಂದು ನೆನಪು.
ವಸಂತ
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಪೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ ಹಕ್ಕಿಗಳುಲಿತವೆ ಚೆಂದ,
ಹಕ್ಕಿಗಳುಲಿತವೆ ಚಂದ
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ !
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ !
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ !
ಬಂದ ವಸಂತ! ನಮ್ಮ ರಾಜ ವಸಂತ !
ಭಾಷಾಂತರ ಮಾಡಿದರೆ ಹೀಗೆ ಮಾಡಬೇಕು ಎನ್ನುವುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ!
-ನೀಲಾಂಜನ

2 comments
Comments feed for this article
March 24, 2008 at 5:13 am
Chakravarty
ಹೌದು. ಪ್ರಾಥಮಿಕ ಶಾಲೆಯಲ್ಲಿ ಇದನ್ನ ಕಂಠ ಪಾಠ ಮಾಡಿದ ನೆನಪು ನನಗೂ. ಈಗಲೂ ವಸಂತ ದ ಬಗ್ಗೆ ಮಾತಾಡುವಾಗ ಈ ಕವಿತೆ ತಾನೇತಾನಾಗಿ ನಾಲಗೆ ತುದಿಯಲ್ಲಿ ಹಾಜರಿ ಹಾಕುತ್ತದೆ.
- ಚಕ್ರವರ್ತಿ
ಚಕ್ರವರ್ತಿ ಅವರೆ,
ನಮಸ್ಕಾರ – ನನ್ನ ಪುಟದವರೆಗೂ ಬಂದು ಓದಿ
ಟಿಪ್ಪಣಿ ಮಾಡಿದ್ದಕ್ಕೆ ಧನ್ಯವಾದಗಳು!
ನನಗೇಕೋ ನಮ್ಮ ಪುಸ್ತಕದಲ್ಲಿ “ಪೂವೂ ಜಗ್ ಜಗ್ ಪೂವಿಟ್ಟೂವಿಟ್ಟವೂ” ಅನ್ನುವ ಸಾಲು “ಟೂವೂವೆಟ್ಟಟ್ಟೂವಿಟ್ಟೂವಿಟ್ಟವೂ” ಎಂದು ಇತ್ತೇನೋ ಎನ್ನಿಸುತ್ತೆ – ಆದರೆ, ನನ್ನ ನೆನೆಪೇ ಸರಿ ಇಲ್ಲವೋ ಗೊತ್ತಿಲ್ಲ.
-ನೀಲಾಂಜನ
March 4, 2009 at 7:45 pm
ತುರಂಗ
ನನ್ನ ಇಂಗ್ಲಿಷ್ ಗೀತೆಗಳ ಪ್ರತಿಯಂತೆ(ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ೧೯೮೩ರಲ್ಲಿ ಅಚ್ಚಾದದ್ದು)
ವಸಂತ ಬಂದ ಋತುಗಳ ರಾಜ ತಾ ಬಂದ
ವಸಂತ ಬಂದ, ಋತುಗಳ ರಾಜ ತಾ ಬಂದ, ಇರಬೇಕು.
ಚಿಗುರನು ತಂದ ಪೆಣ್ಗಳ ಕುಣಿಸುತ ನಿಂದ,
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಇರಬೇಕು.
ಚಳಿಯನು ಕೊಂದ ಹಕ್ಕಿಗಳುಲಿತವೆ ಚೆಂದ,
ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಇರಬೇಕು.
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ !
ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ ! ಇರಬೇಕು.
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಟ, ಇರಬೇಕು.
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು ಇರಬೇಕು.
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು, ಇರಬೇಕು.
ಬಂದ ವಸಂತ! ನಮ್ಮ ರಾಜ ವಸಂತ !
ಬಂದ ವಸಂತ – ನಮ್ಮಾ
ರಾಜ ವಸಂತ ! ಇರಬೇಕು.